Sri Sadguru Shiva Yogi Halashankara Ashram,Doni,KappathGudd 2.7

Sri Halasomeshwara Maha Swamiji,Sri Haleshwara Mutt,Doni
Gadag, 582103
India

About Sri Sadguru Shiva Yogi Halashankara Ashram,Doni,KappathGudd

Sri Sadguru Shiva Yogi Halashankara Ashram,Doni,KappathGudd Sri Sadguru Shiva Yogi Halashankara Ashram,Doni,KappathGudd is a well known place listed as Hindu Temple in Gadag , Non-governmental Organization (ngo) in Gadag ,

Contact Details & Working Hours

Details

ಭಾರತ ಭೂಮಿ ಧರ್ಮದ ತವರೂರು, ಶಾಂತಿಯ ನೆಲೆಬೀಡು, ವಿಶ್ವಕ್ಕೆ ಸಮನ್ವಯತೆಯ ಸಂದೇಶವನ್ನು ಭೋಧಿಸಿದಪುಣ್ಯಭೂಮಿ,ಅನೇಕ ಧರ್ಮಗಳತವರೂರು,ಯೋಗಿಗಳು,ತ್ಯಾಗಿಗಳು,ಮಹಷರ್ಿಗಳು,ಮಹಾತ್ಮರು,ಶಾಂತಿಧೂತರು,ದೇಶಭಕ್ತರು,ಮಹಾದಾನಿಗಳು ಈ ನಾಡಿನಲ್ಲಿ ತಮ್ಮದೇ ಕೊಡುಗೆ ನೀಡಿ ಜಗತ್ತಿನಲ್ಲಿ ಭಾರತಾಂಬೆಯ ಕೀತರ್ಿಯನ್ನು ಬೆಳಗಿಸಿದ್ದಾರೆ.
ಮಾನವ ಬಾಳಿನಲ್ಲಿ ಸುಖ,ಶಾಂತಿ,ನೆಮ್ಮದಿಗಳು ದೊರೆಯಬೇಕಾದರೆ ಧರ್ಮವೇ ಮೂಲ ಕಾರಣ. ಭಕ್ತಿ,ಜ್ಞಾನ,ಕ್ರಿಯೆ ಈ ತ್ರಿವಿಧಿಗಳನ್ನು ತಮ್ಮ ಬಾಳಿನಲ್ಲಿ ಅರಿತು ನಡೆದುಕೊಂಡರೆ ಜನ್ಮ ಸಾರ್ಥಕತೆ ಪಡೆಯುತ್ತದೆ. ನಾವು ಧರ್ಮವನ್ನು ರಕ್ಷಿಸಿದರೆ,ಧರ್ಮ ನಮ್ಮನ್ನು ರಕ್ಷಿಸುತ್ತದೆ. ಎಲ್ಲಿ ಧರ್ಮವಿದೆ ಅಲ್ಲಿ ಜಯವಿದೆ. ಧರ್ಮದ ಜ್ಞಾನ ಜ್ಯೋತಿಗೆ ಆಜ್ಞಾನಾಂದಕಾರದ ಕೂಡಿ ಬಂದಾಗ ಅನಂತ ಮಹಾತ್ಮರು ಜನ್ಮತಾಳಿ ತಮ್ಮ ಸ್ವಾನುಭಾವದ ಎಣ್ಣೆ ಸುರಿದು,ಸತ್ಯಾನ್ವೇಷಣೆ ವಿವೇಕದ ಕಡ್ಡಿಯಿಂದ ಕುಡಿ ಕಡಿದು ಧರ್ಮ ಜ್ಯೋತಿಯನ್ನು ಜಗತ್ತಿನಲ್ಲಿ ಪುನಃ ಬೆಳಗಿಸಿ, ಮಾನವ ಕುಲಕೋಟಿಗೆ ಮಹದುಪಕಾರ ಮಾಡಿದ್ದಾರೆ
ಅಂತೆಯೇ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ಶ್ರೀರಾಂಪುರ,ಇವರ ಕೃಪಾಶೀವರ್ಾದದಿಂದ ಸ್ಥಾಪಿತಗೊಂಡ ಶ್ರೀಕ್ಷೇತ್ರ ಡೋಣಿಯ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಶ್ರೀಮಠವು ನೂರಾರು ವರ್ಷಗಳ ಭವ್ಯ ಇತಿಹಾಸದೊಂದಿಗೆ ಜಾತಿ,ಮತ,ಪಂಗಡ ಎನ್ನದೇ ಸಮನ್ವಯತೆಯ ತತ್ವವನ್ನು ಜಗತ್ತಿಗೆ ಸಾರಿದ ಕೀತರ್ಿ ಶ್ರೀಮಠಕ್ಕೆ ಸಲ್ಲುತ್ತದೆ.
ಶ್ರೀಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಗುರುಪರಂಪರೆಯ ಪರಮಪೂಜ್ಯ ಶ್ರೀ ಸದ್ಗುರು ಶಿವಯೋಗಿ ಹಾಲವೀರಪ್ಪಜ್ಜ ಮಹಾಸ್ವಾಮಿಗಳವರ ತಪೋಬಲದಿಂದ, ಶ್ರೀ ಸದ್ಗುರು ಶಿವಯೋಗಿ ಲಿಂ// ಸಣ್ಣಹಾಲಸ್ವಾಮಿಗಳ ಕಾಯಕಶಕ್ತಿಯಿಂದ ಶ್ರೀ ಸದ್ಗುರು ಶಿವಯೋಗಿ ಲಿಂ// ಹಾಲಶಂಕರ ಸ್ವಾಮಿಗಳವರ ವಾಕ್ಸಿದ್ದಿಯಿಂದ ಶ್ರೀಮಠವು ನಾಡಿನಾದ್ಯಂತ ಧರ್ಮ ಪ್ರಚಾರದ ನಡುವೆ ನೂರಾರು ಶಾಖಾಮಠಗಳನ್ನು ಸ್ಥಾಪಿಸಿ, ಜನಜಾಗೃತಿಗಾಗಿ ಶ್ರಮಿಸಿರುವುದು ಸರ್ವವಿಧಿತವಾಗಿದೆ. ಅನ್ನದಾಸೋಹ,ಜ್ಞಾನ ದಾಸೋಹ,ಸಾಮೂಹಿಕ ವಿವಾಹಗಳಂತಹ ಸಾಮಾಜಿಕ ಕಾರ್ಯಗಳು ನಿರಂತರವಾಗಿ ಶ್ರೀಮಠವು ನಡೆಸಿಕೊಂಡು ಬರುತ್ತಿದೆ.
ಅಂತೆಯೇ ಶ್ರೀಮಠದ ನೂತನವಾಗಿ ಆಶ್ರಮ ಕಟ್ಟಡವನ್ನು ನಿಮರ್ಿಸಲು ಶ್ರೀ ಸದ್ಗುರು ಶಿವಯೋಗಿ ಶ್ರೀಹಾಲಸೋಮೆಶ್ವರ ಹಾಲಸ್ವಾಮಿಗಳು ಹಾಗೂ ಗ್ರಾಮದ ಸದ್ಬಕ್ತರು ಸಂಕಲ್ಪವನ್ನು ಮಾಡಿರುತ್ತಾರೆ.
ನೂತನ ಆಶ್ರಮ ಕಟ್ಟಡನಿಮರ್ಾಣದ ಅಂದಾಜು ವೆಚ್ಚ ಮೂವತ್ತೊಂದು ಲಕ್ಷ(31,00000) ರೂ.ಗಳನ್ನು ಅಂದಾಜಿಸಲಾಗಿದೆ.
ಶ್ರೀಮಠದ ಸಹೃದಯಿ ಸದ್ಬಕ್ತರು, ಮಹಾದಾನಿಗಳು ಈ ಧರ್ಮಕಾರ್ಯದಲ್ಲಿ ಸೇವೆ ಸಲ್ಲಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ತಮ್ಮ,
ಶ್ರೀ ಗುರುಹಾಲಶಂಕರಸ್ವಾಮೀಜಿ ಆಶ್ರಮ ಕಟ್ಟಡ(ವೃದ್ದಾಶ್ರಮ,ಅನಾಥಾಶ್ರಮ,ಗೋಶಾಲೆ,ವೈಧಿಕ ಪಾಠಶಾಲೆ) ನಿಮರ್ಾಣ ಸೇವಾ ಸಮತಿ
ಮತ್ತು ಡೋಣಿಗ್ರಾಮದ ದೈವದವರು.
ವಿಶೇಷ ಸೂಚನೆ:- ಆಶ್ರಮ ಕಟ್ಟಡ ನಿಮರ್ಾಣದ ಸೇವೆಗೆ ಕಾಣಿಕೆ ಸಲ್ಲಿಸುವ ದಾನಿಗಳು ಶ್ರೀ ಮಠದಲ್ಲಿ ಗುರುಗಳಲ್ಲಿ ಸಲ್ಲಿಸಿ ಪಾವತಿ ಪಡೆಯಿರಿ ಅಥವಾ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಲು ವಿನಂತಿ.Karnataka Vikas Grameena Bank
Branch;; Doni IFSC Code ; KVGB0006109
Account No ;; 89050569781
Account Name : - SHRI HALESHWARA DEVASTAN SEVA SAMEETI DONI
HOLDR Name:-
(1) SHRI HALASOMESHWARA H GURUPADADEVARMATH
(2)SHRI G M VISHWARADHYASWAMI