Sirsi Siri - ಶಿರಸಿ ಸಿರಿ 5.37

4.6 star(s) from 147 votes
Sirsi, 581401
India

About Sirsi Siri - ಶಿರಸಿ ಸಿರಿ

Sirsi Siri - ಶಿರಸಿ ಸಿರಿ Sirsi Siri - ಶಿರಸಿ ಸಿರಿ is a well known place listed as Media/news/publishing in Sirsi ,

Contact Details & Working Hours

Details

ಈ ನಿಮ್ಮ ಶಿರಸಿ ಸಿರಿ ಪತ್ರಿಕೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಗಳಂತೆ ಸ್ಥಳಿಯ ಸಕಾರಾತ್ಮಕ ಸುದ್ಧಿಗಳಿಗೆ ಪ್ರಾಮುಖ್ಯತೆ ಕೊಟ್ಟು, ಸ್ಥಳಿಯ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲುತ್ತಾ, ನಮ್ಮ ವಿಶೇಷತೆಗಳ ಬಣ್ಣಿಸುತ್ತಾ, ನಮ್ಮ ಸುತ್ತಮುತ್ತಲಿನ ಆಗುಹೋಗುಗಳು, ನಮಗೇ ತಿಳಿಯದಂತಹ ಅನೇಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ, ಶಿರಸಿಗರೆಲ್ಲರನ್ನೂ ಒಂದು ಕುಟುಂಬದವರಂತೆ ಸಹಾಯ ಸಹಕಾರಕ್ಕೆ ಕೈ ಜೋಡಿಸುತ್ತಾ, ನಕಾರಾತ್ಮಕತೆಗೆ ಗುಡ್ ಬೈ ಹೇಳುವ ಪ್ರಯತ್ನ ನಮ್ಮದು.

ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಮತ್ತು ಸಹಕಾರ ಇರುತ್ತವೆ ಅನ್ನುವ ಆಶಯ ಹೊಂದಿದ್ದೇವೆ. ಹೊಸತನದ ಹರಿಕಾರನಾಗಿ, ಸದಭಿರುಚಿಯ ದ್ಯೋತಕವಾಗಿ, ತಾಜಾತನದ ಕುರುಹಾಗಿ, ಕಲೆ, ಸಂಸ್ಕೃತಿ, ಪರಂಪರೆಯನ್ನು, ನಮ್ಮೂರ ವಿಶೇಷತೆಗಳನ್ನು ಹೊರಗಿನವರಿಗೆ ತಿಳಿಸಲು ಹೆಮ್ಮೆ ಪಡುವ ರೀತಿಯಲ್ಲಿ ಬೆಳೆಯಬೇಕೆಂಬುದು ನಮ್ಮಾಸೆ. ನಮ್ಮೂರಲ್ಲಿ ಎಲ್ಲವೂ ಇದ್ದು, ಏನೂ ಇಲ್ಲ ಅನ್ನುವವರಿಗೆ ಈ ನಿಮ್ಮ ಪತ್ರಿಕೆಯು ಒಂದು ವೇದಿಕೆಯಾಗಲಿ. ಸಾರ್ವಜನಿಕ ಸಮಸ್ಯೆಗಳಿಗೆ, ತೊಂದರೆ ತಾಪತ್ರಯಗಳಿಗೆ ನಮ್ಮ ಈ ಮಾಧ್ಯಮದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು, ನಿಮ್ಮ ಜನಪ್ರತಿನಿಧಿಗಳ ಬಗ್ಗೆ, ಅವರ ಕಾರ್ಯ ಕೌಶಲಗಳ ಬಗ್ಗೆ ತಿಳಿದುಕೊಳ್ಳಲು, ಸ್ಥಳಿಯರಿಗೆ ಮೊದಲ ಆದ್ಯತೆಯಾಗಿ ಎಲ್ಲಾ ರೀತಿಯಕ್ಕೆ ಬೆಂಬಲಕ್ಕೆ, ಒಗ್ಗಟ್ಟಿಗೆ 'ಶಿರಸಿ ಸಿರಿ' ಮೂಲಕ ನೀವಿರಿ.