Akkihebbalu-SLN-Temple 3.68

Akkihebbalu
Akkihebbal, 571605
India

About Akkihebbalu-SLN-Temple

Akkihebbalu-SLN-Temple Akkihebbalu-SLN-Temple is a well known place listed as Tours/sightseeing in Akkihebbal , Hindu Temple in Akkihebbal ,

Contact Details & Working Hours

Details

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವು ಹಳೆಯ ಊರಿನಲ್ಲಿರುವ ದೇವಸ್ತಾನದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ದೇವಾಲಯವು ಚೌಕಾಕೃತಿಯ ಪ್ರಾಕಾರದ ಒಳಗೆ ಇದೆ. ಸುತ್ತಲೂ ಕಲ್ಲಿನಿಂದ ನಿರ್ಮಿತವಾದ ಪ್ರಾಕಾರದ ಗೋಡೆಗಳನ್ನು ಹೊಂದಿದೆ.ಪ್ರಾಕಾರದ ಮದ್ಯದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯಾ ದೇವಾಲಯವು,ಈ ದೇವಾಲಯದ ಉತ್ತರಕ್ಕೆ ಏಕ ಕೊಠಡಿಯ ಲಕ್ಷ್ಮೀ ಗುಡಿ ಹಾಗು ಆಗ್ನೇಯ ಮೂಲೆಯಲ್ಲಿ ಯಜ್ಞ ಶಾಲೆ ಇದೆ.ದೇವಾಲಯವು ಪಶ್ಚಿಮ ದಿಕ್ಕಿನಲ್ಲಿ ಪ್ರವೇಶ ದ್ವಾರವನ್ನು ಹೊಂದಿದೆ. ಮೂರ್ತಿಯು ಸಹ ಪಶ್ಚಿಮಾಭಿಮುಖವಾಗಿದೆ. ದೇವಾಲಯವು ಗರ್ಭಗೃಹ, ಅಂತರಾಳ, ಮಹಾ ಮಂಟಪ ಮತ್ತು ಮುಖ ಮಂಟಪಗಳನ್ನು ಹೊಂದಿದೆ.
ಈ ದೇವಾಲಯದ ರಚನಾ ಶೈಲಿಯು ವಿಜಯನಗರದ ನಂತರದ ಕಾಲದ್ದೆಂದು ತಿಳಿದು ಬರುತ್ತದೆ. ಆದರೆ ಗರ್ಭ ಗೃಹದಲ್ಲಿ ಇರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ವಿಗ್ರಹವು ಹೊಯ್ಸಳ ಶೈಲಿಗೆ ಸೇರುತ್ತದೆ. ದೇವಾಲಯದ ಕಂಬಗಳು ಅತ್ಯಂತ ಸರಳವಾಗಿ ನಿರ್ಮಿತವಾಗಿವೆ. ಕಂಬಗಳು ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು, ಮಧ್ಯದಲ್ಲಿ ಅಷ್ಟಭುಜಾಕೃತಿಯನ್ನು ಹೊಂದಿದ್ದು, ಮೇಲೆ ಪುನಃ ಉರುಳೆಯಾಕರವಾಗಿದೆ. ನವರಂಗದ ಪೂರ್ವದ ಗೋಡೆಯಲ್ಲಿ ಅಂದರೆ ಅಂತರಾಳದ ಪ್ರವೇಶ ದ್ವಾರದ ಬಲ ಮತ್ತು ಎಡ ಭಾಗಗಳಲ್ಲಿ ನಿರ್ಮಿತವಾದ ಅಲಂಕೃತ ಗೂಡುಗಳು ಮತ್ತು ಅದರಲ್ಲಿ ದೇವ ದೇವಿಯರ ವಿಗ್ರಹಗಳಿವೆ.ಇದಲ್ಲದೆ ಪ್ರಾಕಾರದ ಪಶ್ಚಿಮದ ಗೋಡೆಗೆ ಸೇರಿದಂತೆ, ಅಂದರೆ ಮುಖ್ಯ ದ್ವಾರದ ಎರಡು ಪಕ್ಕಗಳಲ್ಲಿ ಕೈಸಾಲೆಗಳಿವೆ. ಮುಖ್ಯ ದ್ವಾರದ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿತವಾಗಿರುವ ಮೂರು ತಲಗಳನ್ನೂ ಮತ್ತು ಅಷ್ಟೇ ಕಳಶಗಳನ್ನು ಹೊಂದಿದ ಗೋಪುರವಿದೆ.ಈ ಗೋಪುರದ ರಚನೆಯಲ್ಲಿ ಮೈಸೂರು ಒಡೆಯರ ಕಾಲದ ಕುಶಲಕರ್ಮಿಗಳ ಕಲೆಗಾರಿಕೆಯನ್ನು ಕಾಣುತ್ತೇವೆ.ಗರ್ಭ ಗೃಹದ ಮೇಲೆ ಅತ್ಯಂತ ಸುಂದರವಾಗಿ ನಿರ್ಮಿತವಾದ ವಿಮಾನ ಗೋಪುರವಿದೆ, ಇದು ಸಹ ಇಟ್ಟಿಗೆ ಗಾರೆಯಿಂದ ನಿರ್ಮಿತವಾಗಿದೆ.
ಲಕ್ಷ್ಮೀನರಸಿಂಹಸ್ವಾಮಿ ವಿಗ್ರಹವು ಸುಖಾಸಿನ ಭಂಗಿಯಲ್ಲಿ ಗರುಡ ಪೀಠದ ಮೇಲೆ ಕುಳಿತಿದೆ. ಸ್ವಾಮಿಯ ಎಡ ತೊಡೆಯ ಮೇಲೆ ಮಹಾಲಕ್ಷ್ಮಿಯ ವಿಗ್ರಹವು ಸುಖಾಸನದಲ್ಲಿದೆ. ಮೂರ್ತಿಯು ನಾಲ್ಕು ಕೈಗಳನ್ನೂ ಹೊಂದಿದ್ದು, ಮೇಲಿನ ಎಡಗೈಯಲ್ಲಿ ಶಂಖವನ್ನು, ಬಲಗೈಯಲ್ಲಿ ಚಕ್ರವನ್ನು ಹಿಡಿದಿದೆ.ಲಕ್ಷ್ಮಿಯು ಕೇವಲ ಎರಡು ಕೈಗಳನ್ನು ಹೊಂದಿದ್ದು ಬಲಗೈಯಲ್ಲಿ ಸ್ವಾಮಿಯನ್ನು ಆಲಂಗಿಸಿರುವ ರೀತಿಯಲ್ಲಿ ರೂಪಿಸಲಾಗಿದೆ.ಎಡಗೈಯಲ್ಲಿ ಅಮೃತ ಕಳಶವಿದೆ.ದೇವತೆಯ ವಿಗ್ರಹವು ಅತ್ಯಂತ ಸುಂದರವಾಗಿದೆ.
ಸಂಪೂರ್ಣ ಹೊಯ್ಸಳ ಶೈಲಿಗೆ ಸೇರುವ ಈ ವಿಗ್ರಹವನ್ನು ಬೇರೆಡೆಯಿಂದ ತಂದು ಸ್ತಾಪಿಸಿರಬಹುದೆಂದು ಊಹಿಸಲಾಗಿದೆ.ಅಮ್ಮನವರ ವಿಗ್ರಹವು ವಿಜಯನಗರದ ಕಾಲಕ್ಕೆ ಸೇರುತ್ತದೆ.ಈ ದೇವಾಲಯದ ರಚನೆಯ ಕಾಲವನ್ನು ಸರಿಸುಮಾರು ೧೭-೧೮ನೆ ಶತಮಾನಕ್ಕೆ ಕೊಂಡೊಯ್ಯಬಹುದು.
ಸಂರಕ್ಷಣ ಕಾರ್ಯ:
ಶ್ರೀ ಧರ್ಮಸ್ತಳ ಮಂಜುನಾಥೆಶ್ವರ ಧರ್ಮೊತ್ತಾ ನ ನ್ಯಾಸ ಟ್ರಸ್ಟ್, ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಸಮಿತಿಯ ಸಹಯೋಗದೊಂದಿಗೆ ದೇವಾಲಯದ ಪುನರ್ಜೀವನ ಕಾರ್ಯವನ್ನು ನೆರವೇರಿಸಿದೆ.ಈ ಸಂರಕ್ಷಣ ಕಾರ್ಯದ ವೆಚ್ಚದ ಮೊತ್ತದಲ್ಲಿ ಶೇ ೫೦ ಭಾಗವನ್ನು ಗ್ರಾಮಸ್ತರನ್ನು ಒಳಗೊಂಡ ದೇವಾಲಯ ಸಮಿತಿ ಮತ್ತು ಉಳಿದ ೫೦ ಭಾಗವನ್ನು ಟ್ರಸ್ಟ್ ಬಳಸಿದೆ.
ಈ ದೇವಾಲಯ ಪ್ರಾಕೃತಿಕವಾಗಿ ತನ್ನ ಭದ್ರತೆಯನ್ನು ಕಳೆದುಕೊಂಡಿತ್ತು. ದೇವಾಲಯದ ಪ್ರಾಕಾರ ಮಣ್ಣಿನಿಂದ ಆವೃತವಾಗಿ ಅದಿಷ್ಟಾನದ ಭಾಗ ಮಣ್ಣಿನಲ್ಲಿ ಹುದುಗಿಹೊಗಿತ್ತು. ಪ್ರಥಮ ಹಂತದಲ್ಲಿ ದೇವಾಲಯದ ಪ್ರಾಕಾರ ಮತ್ತು ಮಹಾದ್ವಾರದ ಮುಂದೆ ಆವರಿಸಿದ್ದ ಮಣ್ಣಿನ ಪದರಗಳನ್ನು ಉತ್ಖನನ ಮಾಡಿ ತೆಗೆಯಲಾಯಿತು. ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಗಳು ಹಾಗು ತಳಪಾಯ ಕುಸಿದಿತ್ತು.ನಶಿಸಿದ್ದ ಗೋಡೆಗಳಿಗೆ ಆಧಾರ ಗೋಡೆಗಳನ್ನು ಕಟ್ಟಿ ಅವುಗಳನ್ನು ಕಾಪಾಡಿದ್ದರು.
ದೇವಾಲಯದ ಗರ್ಭ ಗೃಹ ಅಂತರಾಳದ ಗೋಡೆಯ ಹೊರಕವಚಗಳನ್ನು ಬಿಚ್ಚಿ ದೇವಾಲಯದ ಸಂಪೂರ್ಣ ತಳಪಾಯವನ್ನು ಭದ್ರಗೊಳಿಸಿ ನಂತರ ಗೋಡೆಗಳನ್ನು ಪುನರ್ ನಿರ್ಮಿಸಲಾಯಿತು.ದೇವಾಲಯದ ಗರ್ಭಗೃಹದ ಮೇಲಿದ್ದ ವಿಮಾನ, ಸ್ವಾಮಿಯ ಆಲಯದ ಪಕ್ಕದಲ್ಲಿದ್ದ ಶ್ರೀ ಲಕ್ಷ್ಮೀ ಆಲಯದ ತಳಪಾಯ, ಗೋಡೆ ಹಾಗು ವಿಮಾನ ಮತ್ತು ಮಂಟಪಗಳು ಶಿಥಿಲವಾಗಿದ್ದು ಅವುಗಳನ್ನು ಪ್ರಾಚೀನ ಮಾದರಿಯಲ್ಲಿ ಪುನರ್ರಚಿಸಲಾಗಿದೆ.
ದೇವಾಲಯದ ಸುತ್ತಲು ಹಾಸು ಕಲ್ಲುಗಲ್ಲುಗಳನ್ನು ಹಾಕಿಸಿ ದೇವಾಲಯದ ತಳಪಾಯಕ್ಕೆ ನೀರು ಸೇರದಂತೆ ಮಾಡಲಾಗಿದೆ. ಪ್ರಾಕಾರದ ಗೋಡೆಗಳಲ್ಲಿ ಇದ್ದ ಯಜ್ಞಶಾಲೆ ಮಂಟಪಗಳು ಸಂಪೂರ್ಣವಾಗಿ ನಾಶವಾಗಿದ್ದವು, ಅವುನ್ನು ಸಹ ಸಂರಕ್ಷಿಸಲಾಗಿದೆ.ಮಹಾದ್ವಾರದ ಮೇಲಿನ ಗೋಪುರದಲ್ಲಿ ಇದ್ದ ಗಾರೆಯಿಂದ ನಿರ್ಮಿತವಾದ ಶಿಲ್ಪಗಳು ಕೆಲವು ನಾಶವಾಗುವ ಹಂತವನ್ನು ತಲುಪಿದ್ದಾರೆ ಮತ್ತೆ ಕೆಲವು ಭಗ್ನವಾಗಿದ್ದವು. ಅಂತಹ ಮೂರ್ತಿಗಳನ್ನು ಸರಿಪಡಿಸಿ ಉಳಿದವುಗಳನ್ನು ಸಂರಕ್ಷಿಸುವ ಕಾರ್ಯಗಳನ್ನು ಮಾಡಲಾಗಿದೆ.
ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ (ಮಾಘ ಮಾಸದ ಕ್ರಷ್ಣ ಪಕ್ಷ, ಪ್ರತಿಪತ್-ದ್ವಿತೀಯ ಮಹಾ ನಕ್ಷತ್ರ), ಶ್ರೀ ನರಸಿಂಹ ಜಯಂತಿ, ಶಂಕರ ಜಯಂತಿ ಹಾಗು ರಾಮ ನವಮಿ,ಪ್ರತಿ ನಿತ್ಯ ಸ್ವಾಮಿಗೆ ನಿತ್ಯ ಪೂಜೆ ನಡೆಯುತ್ತದೆ.